ಕೊಪ್ಪಳ: ಗಾಲಿ ಜನಾರ್ಧನ್ ರೆಡ್ಡಿ ಹೊಸ ಪಕ್ಷದ ಬಗ್ಗೆ ನಮ್ಮ ರಾಜ್ಯಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹಾಲಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಹನಮಂತನ ಆಶೀರ್ವಾದ ಬಿಜೆಪಿ ಹಾಗೂ ನನ್ನ ಮೇಲಿದೆ. ಬಿಜೆಪಿಯ ಕೆಲವು ಮುಖಂಡರು ರೆಡ್ಡಿ ಜೊತೆ ಕಾಣಿಸಿಕೊಂಡಿದ್ದರು. ಈಗ ಅವರೇ ಹೊಸ ಪಕ್ಷ ಹುಟ್ಟು ಹಾಕಿದ್ದಾರೆ. ಅವರ ಜೊತೆ ಕಾಣಿಸಿಕೊಂಡವರು ರೆಡ್ಡಿ ಜೊತೆ ಹೋಗುವುದಿಲ್ಲ ಎಂದಿದ್ದಾರೆ.
ಜನಾರ್ಧನ್ ರೆಡ್ಡಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ತಳಮಳ ಉಂಟಾಗಿದೆ. ಹೊಸ ಪಕ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹೊಡೆತ ನಿಶ್ಚಿತ ಎನ್ನಲಾಗಿದೆ. ರೆಡ್ಡಿ ಆಪ್ತ ಸ್ನೇಹಿತ ರಾಮುಲು ಅಜ್ಞಾತ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವರದಿಯಾಗಿದೆ.