ಬೆಳಗಾವಿ: ಪುಸ್ತಕವೊಂದರಲ್ಲಿ ಹಿಂದು ಶಬ್ದದ ಬಗ್ಗೆ ಕೆಟ್ಟ ಅರ್ಥ ಬಳಸಲಾಗಿದೆ ಎಂದು ನಾನು ಹೇಳಿದ್ದೇನೆ ವಿನಃ ನಾನು ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಪುಸಕ್ತವೊಂದರಲ್ಲಿ ಬಳಕೆಯಾಗಬೇಕಿರುವ ಶಬ್ಧದ ಕುರಿತು ಚರ್ಚೆ ಆಗಬೇಕು. ಅಲ್ಲಿ ಕೆಟ್ಟ ಅರ್ಥ ಬಳಸಲಾಗಿದೆ ಎಂದು ನಾನು ಹೇಳಿದ್ದೆನೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಸತೀಶ ಜಾರಕಿಹೊಳಿ ಸ್ಪಷಪಡಿಸಿದರು.
ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಿತಿ ರಚಿಸಲಿ. ನಾನು ತಪ್ಪು ಮಾಡಿದ್ದು ನಿಜವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೆನೆ ಎಂದು ತಿಳಿಸಿದರು.