ವಿಜಯನಗರ; ಹೊಂಡದಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಅಕ್ಕಂದಿರು ಸಹಿತ ನಾಲ್ವರೂ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.

ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18)  ಅಪೂರ್ವಾ (18) ಎನ್ನುವ ಒಂದೇ ಕುಟುಂಬದ ಕುಡಿಗಳು ನೀರು ಪಾಲಾಗಿದ್ದಾರೆ.

ಹೊಂಡದ ಸಮೀಪ ಆಟವಾಡುತ್ತಿದ್ದ ಅಭಿ ಕಾಲು ಜಾತಿ ಹೊಂಡಕ್ಕೆ ಬಿದ್ದು ನೀರಿನಲ್ಲಿ‌ ಮುಳುಗುತ್ತಿದ್ದ,  ಇತನ ರಕ್ಷಣೆಗೆ ಒಬ್ಬರಾದಂತೆ ಒಬ್ಬರು ಹೋಗಿ ನೀರು ಪಾಲಾಗಿದ್ದು, ಮೂರು ಶವ ಪತ್ತೆಯಾಗಿದ್ದು, ಅಪೂರ್ವಾ ಶವಕ್ಕಾಗಿ ಹುಡುಕಾಟ ನಡೆದಿದೆ.