ಬಾಗಲಕೋಟೆ: ಕುಡಿದ ನಶೆಯಲ್ಲಿ ಮೊಬೈಲ್ ಟಾವರ್ ಏರುವುದು, ರಸ್ತೆ ಮಧ್ಯದಲ್ಲೆ ಡಾನ್ಸ್ ಮಾಡುವುದನ್ನು ನೋಡಿರುತ್ತಿರಿ. ಆದರೆ ಇಲ್ಲೊಬ್ಬ ಭೂಪ ಕುಡಿದ ಮತ್ತಿನಲ್ಲಿ ಮೊಸಳೆ ಹಿಡಿಯಲು ಮುಂದಾಗಿದ್ದಾನೆ.
ನಶೆಯಲ್ಲಿ ವೀರಾವೇಶದಿಂದ ಮಕಸಳೆ ಹಿಡಿಯಲು ಕೆರೆಗೆ ಇಳಿದವನಿಗೆ, ನೀರಿನಲ್ಲಿ ಈಜಲಾಗದೆ ಸುಸ್ತಾಗಿದ್ದಾನೆ. ಕೊನೆಗೆ ಬೇರೊಬ್ಬರ ಸಹಾಯದಿಂದ ಕುಡುಕನ ಜೀವ ಉಳಿದಿದೆ.
ಇದು ನಡೆದಿರುವುದು ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ. ಮೌಲಾಸಾಬ್ ವಾಲೀಕಾರ ಎಂಬ ಕುಡುಕನ ಇಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ.
ಕುಡಿದ ಮತ್ತಿನಲ್ಲಿ ಮೊಸಳೆ ಹಿಡೊಯಲು ಕೆರೆಗೆ ಇಳಿದ, ನೀರಿನಲ್ಲಿ ಈಜಲಾಗದೆ ಮುಳುಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಕೆರೆಯಲ್ಲಿ ಮೊಸಳೆ ಕಂಡುಬಂದಿದೆ. ಮೊಸಳೆ ನೋಡಲು ಜನ ಮುಗಿಬಿದ್ದಿದ್ದರು. ಹೀಗೆ ಮೊಸಳೆ ನೋಡಲು ಬಂದಿದ್ದ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿ, ನಶೆಯಲ್ಲಿ ಮೊಸಳೆ ಹಿಡಿಯಲು ಕೆರೆಗೆ ಜಿಗಿದಿದ್ದ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.