ಬೀದರ್: ಗಣೇಶ ವಿಸರ್ಜನೆ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದ್ದಾರೆ. ಐದು ದಿನಗಳ ಪೂಜೆ ಬಳಿಕ ಭಾನುವಾರ ಸಂಜೆ ಗಣೇಶ ವಿಸರ್ಜನೆಗೆ ಚಾಲನೆ ನೀಡಿ, ಗಣ್ಯರೊಂದಿಗೆ ಖೂಬಾ ಕುಣಿದು ಕುಪ್ಪಳಿಸಿದ್ದಾರೆ.

ಸಚಿವ ಖೂಬಾಗೆ ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ರಾಜ್ಯ ಕರ‍್ಯಕಾರಿಣಿ ಸದಸ್ಯ ಸರ‍್ಯಕಾಂತ ನಾಗಮಾರಪಳ್ಳಿ, ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ ಸೇರಿದಂತೆ ಹಲವರು ಸಾಥ್ ನೀಡಿದರು. ಹಿರಿಯರು ಹೆಜ್ಜೆ ಹಾಕಿದ್ದನ್ನು ಕಂಡ ಯುವ ಸಮೂಹ ಮತ್ತಷ್ಟು ಜೋಶ್‌ನಿಂದ ಕುಣಿದು ಕುಪ್ಪಳಿಸುತ್ತಿದೆ.