ಬೆಂಗಳೂರು: ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ಕನ್ನಡದ ಖ್ಯಾತ ನಟ ಕಿಶೋರ್ ಅವರ ಟ್ಟಿಟರ್ ಖಾತೆ ಬ್ಯಾನ್ ಆಗಿದೆ.

ಸಂಸ್ಥೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಖಾತೆಯನ್ನು ಬ್ಯಾನ್ ಮಾಡಿರುವುದಾಗಿ ಟ್ಟಿಟರ್ ಮಾಹಿತಿ ನೀಡಿದೆ.

ಸಾಮಾಜಿಕ ಸಮಸ್ಯೆ ಸೇರಿದಂತೆ ಹಲವಾರು ಗಂಭೀರ ವಿಚಾರಗಳನ್ನು ಕಿಶೋರ್ ಟ್ವಿಟರ್ ನಲ್ಲಿ ಮಾಹಿತಿ ಶೇರ್ ಮಾಡಿಕೊಳ್ಳುತ್ತಿದ್ದರು.

ಕಿಶೋರ್ ಖಾತೆ ಬ್ಯಾನ್ ಮಾಡಿದಕ್ಕೆ ಜಾಲತಾಣದಲ್ಲಿ ಹಲವರು ಟ್ವಿಟರ್ ವಿರುದ್ಧ ಕಿಡಿಕಾರಿದ್ದಾರೆ. ಕಿಶೋರ್ ಅವರ ಖಾತೆಯನ್ನು ಮರು ಆರಂಭಿಸಬೇಕು ಎಂದು ಹಲವರು ದ್ವನಿ ಎತ್ತಿದ್ದಾರೆ.