ಚಿಕ್ಕಮಗಳೂರು : ದತ್ತ ಜಯಂತಿ ವೇಳೆ ದತ್ತಪೀಠದ ದಾರಿಯಲ್ಲಿ ಮೊಳೆ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿ ಶರಣಾಗಿದ್ದಾನೆ.
ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಅಜಂ ಪಾಷಾ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಶುಕ್ರವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಮೂರನೆ ಆರೋಪಿ ಶರಣಾಗಿದ್ದಾನೆ.
ಈ ಪ್ರಕರಣದಲ್ಲಿ ಒಟ್ಟಾರೆ ಮೂವರ ಬಂಧನವಾಗಿದೆ. ಮಹಮ್ಮದ್ ಶಹಬಾಸ್, ವಾಹೀದ್ ಹುಸೇನ್ ಹಾಗೂ ಅಜಂಪಾಷಾ.
ಡಿಸೆಂಬರ್ 6, 7 ಹಾಗೂ 8 ರಂದು ದತ್ತ ಜಯಂತಿ ಕಾರ್ಯಕ್ರಮ ನಡೆದಿತ್ತು. ಮೊದಲ ದಿನ ಮಹಿಳೆಯರು ಹೋಗುವ ದಾರಿಯಲ್ಲಿ ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ವಾಹನ ಸಹಿತ ನಾಲ್ಕೈದು ವಾಹನಗಳು ಪಂಚರ್ ಆಗಿದ್ದವು.