ಗದಗ- gadag: ಭಾರತ– ಪಾಕಿಸ್ತಾನ ಯುದ್ಧ ಅನಿವಾರ್ಯ. ಭಾರತ ಯದ್ಧದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ (tourism) ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಯುದ್ಧಕ್ಕೆ ಸನ್ನದ್ಧರಾಗಿದ್ದೇವೆ. ಭಾರತದ ಕಡೆ ಕಣ್ಣೆತ್ತಿ ನೋಡಿದರೆ ಸಹಿಸಲ್ಲ ಎಂಬುದಕ್ಕೆ ತಕ್ಕ ಶಾಸ್ತಿಯ ಸಂದೇಶವನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೇವೆ ಎಂದು ಹೇಳಿದರು.

ಈ ಹಿಂದೆ ಬಾಂಗ್ಲಾದೇಶ ಪ್ರತ್ಯೇಕಗೊಳಿಸಿದಾಗ ಮತ್ತು ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಯಾವ ವಾತಾವರಣ ಸೃಷ್ಟಿಯಾಗಿತ್ತೋ ಅದೇ ವಾತಾವರಣ ಈಗಲೂ ಇದೆ. ಯುದ್ಧ ಪ್ರಾರಂಭ ಆಗಲಿ, ಆಗದಿರಲಿ; ನಾವೆಲ್ಲರೂ ಒಂದು ಧ್ವನಿಯಾಗಿ ಇರಬೇಕಿದೆ. ದೇಶದ ಪ್ರಶ್ನೆ ಬಂದಾಗ 140 ಕೋಟಿ ಜನರು ಒಂದಾಗಿ, ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸುತ್ತೇವೆ ಎಂದರು.