ಲಂಡನ್: 2019 ರ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅವರು ಮೂರು ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಮೊರ್ಗಾನ್ 2019 ರಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು. 16 ವರ್ಷಗಳ ವೃತ್ತಿಜೀವನದಲ್ಲಿ ಮಾರ್ಗನ್ ಎರಡು ತಂಡಗಳ ಪರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಮೊದಲು ಐರ್ಲೆಂಡ್‌ ತಂಡದ ಪರ, ಆಮೇಲೆ ಇಂಗ್ಲೆಂಡ್‌ ತಂಡದ ಪರವಾಗಿ ಆಡಿದರು. ಇಂಗ್ಲೆಂಡ್ ತಂಡದ ಪರ 16 ಟೆಸ್ಟ್, 248 ಏಕದಿನ ಪಂದ್ಯಗಳು, 115 ಟಿ-20 ಪಂದ್ಯದಲ್ಲಿ ಆಡಿದ್ದಾರೆ.