ಕಲಬುರಗಿ: ಕಾಂಗ್ರೆಸ್ ಪರವಿರುವ ಮತದಾರರ ಹೆಸರುಗಳನ್ನು ಮತದಾರರ ಲಿಸ್ಟ್ ನಿಂದ ಅಳಿಸಿ ಹಾಕಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಮತದಾರರು ಮನವಿ ಮಾಡಿಕೊಳ್ಳದಿದ್ದರೂ, ಮೊಬೈಲ್ ನಂಬರ್ ಮೂಲಕ ಬಿಹಾರ, ರಾಜಸ್ಥಾನ, ಗುಜರಾತ್ ಮೂಲದ ವ್ಯಕ್ತಿಗಳಿಂದ BLO ಗಳಿಗೆ ಸಂದೇಶ ಬರುತ್ತಿವೆ.
ಈ ಹಗರಣದ ಹಿಂದೆ ಬಿಜೆಪಿ ನಾಯಕರ ಕೈವಾಡ ಇರುವ ಬಗ್ಗೆ ಅನುಮಾನವಿದ್ದು, ಈ ಹಿಂದೆ ಬೆಂಗಳೂರಲ್ಲಿ ಚಿಲುಮೆ ಸಂಸ್ಥೆ ಇದೇ ರೀತಿ ಕೆಲಸ ಮಾಡಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಅಮಿತ್ ಶಾ ತಂತ್ರ ಮಾಡುತ್ತಿದ್ದು, ಬಿಜೆಪಿ ಸೋಲಿನ ಭಯದಿಂದ ಈ ರೀತಿ ವಾಮಮಾರ್ಗ ಅನುಸರಿಸುತ್ತಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.