ಚಿಕ್ಕಮಗಳೂರು: ಭಾರೀ ಮಳೆಯ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾದ ಘಟನೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ನಡೆದಿದೆ.

ಮುಳ್ಳಯ್ಯನಗಿರಿ ಗುಡ್ಡದ ಮೇಲ್ಭಾಗದ ರಸ್ತೆಯಿಂದ ಕೆಳ ಭಾಗದ ರಸ್ತೆಗೆ ಜೀಪ್  ಪಲ್ಟಿಯಾಗಿದೆ. ಜೀಪ್‌ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.

ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿಗೆ ಪ್ರವಾಸಕ್ಕೆ ತೆರಳಿದ ಜೀಪ್‌, ಭಾರೀ ಮಳೆ ಹಾಗೂ ಮಂಜಿನ ಕಾರಣಕ್ಕೆ ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.