ಆಸ್ಟ್ರೇಲಿಯಾ: ಭಾರತೀಯ ಟೆನಿಸ್ ಆಟಗಾರರಾದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಗ್ರ್ಯಾಂಡ್ ಸ್ಲಾಮ್ ನಲ್ಲಿ ಸೆಮಿ ಫೈನಲ್ ಪ್ರವೇಶಿದ್ದಾರೆ.

ಮಿಶ್ರ ಡಬಲ್ಸ್ ನಲ್ಲಿ ಈ ಜೋಡಿ ಪಂದ್ಯವಾಡದೇ ಸೆಮಿಸ್ ಗೆ ಎಂಟ್ರಿ ಕೊಟ್ಟಿದೆ. ಪ್ರಶಸ್ತಿಗೆ ಮುತ್ತಿಕ್ಕಲು ಭಾರತದ ಜೋಡಿಗೆ ಇನ್ನೂ ಎರಡು ಹೆಜ್ಜೆ ಬಾಕಿಯಿದೆ.

ಜೆಲೇನಾ- ಡೇವಿಡ್ ಜೊತೆ ಕ್ವಾರ್ಟರ್ ಫೈನಲ್ ಪಂದ್ಯವನ್ನು, ಸಾನಿಯಾ ಜೋಡಿ ಆಡಬೇಕಿತ್ತು. ಅವರು ಟೂರ್ನಮೆಂಟ್ ನಿಂದ್ ವಾಕ್ ಔಟ್ ಆದ ಕಾರಣ, ಭಾರತದ ಜೋಡಿ ನೇರವಾಗಿ ಸೆಮಿಸ್ ಗೆ ಎಂಟ್ರಿ ಕೊಟ್ಟಿದೆ.