ಬೆಳಗಾವಿ: ಇಲ್ಲಿನ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಬಾಲಕಿ ಮೇಲೆ ಅತ್ಯಾ*ಚಾರವೆಸಗಿದ್ದ ಆರೋಪಿಯನ್ನು ಕೊ*ಲೆ ಮಾಡಿದ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯವು ಆರೋಪಿ ಪರಶುರಾಮ ನಿಂಗಪ್ಪ ಕಾಳೆ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸುವುದರ ಜೊತೆಗೆ, ಮೃತನ ತಾಯಿಗೆ ಪರಿಹಾರವಾಗಿ ೨ ಲಕ್ಷ ರೂಪಾಯಿಗಳನ್ನು ನೀಡಲು ಆದೇಶಿಸಿದೆ.
ಧಾರವಾಡ ಜಿಲ್ಲೆಯ ಮುಳಮುತ್ತಲ ಗ್ರಾಮದ ನಿವಾಸಿಯಾದ ಪರಶುರಾಮ ಕಾಳೆ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನು ೨೦೨೩ರಲ್ಲಿ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ಜಮೀನೊಂದರಲ್ಲಿ ಬಸವರಾಜ ಯಲ್ಲಪ್ಪ ಕಾಳಿ ಎಂಬಾತನನ್ನು ಚಾ*ಕುವಿನಿಂದ ಇರಿದು ಕೊಂದಿದ್ದನು. ಬಸವರಾಜ ಕಾಳಿಯು ಫೋ*ಕ್ಸೋ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಪಡೆದಿದ್ದನು.
ಈ ಕೊಲೆ ಪ್ರಕರಣವು ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸಿಪಿಐ ಐ.ಎಂ.ಮಠಪತಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ ಶಿರೋಳ ಅವರು, ಆರೋಪಿ ಪರಶುರಾಮ ಕಾಳೆಗೆ ಜೀವಾವಧಿ ಶಿಕ್ಷೆ ಮತ್ತು ೨ ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೆ, ದಂಡದ ಹಣವನ್ನು ಕೊ*ಲೆಯಾದ ಬಸವರಾಜ ಕಾಳೆ ಅವರ ತಾಯಿಗೆ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಆರ್.ಎ.ಬಾರಾವಲಿ ವಾದ ಮಂಡಿಸಿದ್ದರು.