ಮುಂಬೈ: ಕ್ರಿಕೆಟರ್ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳಾದ ಆಥಿಯಾ ಅವರನ್ನು ರಾಹುಲ್ ವರಿಸಿದ್ದಾರೆ.
ಮುಂಬೈನ ಕಾಂಡ್ಲಾ ಫಾರ್ಮ್ ಹೌಸ್ ನಲ್ಲಿ ಸೋಮವಾರ ಸಂಜೆ 4 ಗಂಟೆಗೆ ನಿಗದಿಯಾದ ಮೂಹರ್ತದಲ್ಲಿ ತಾಳಿ ಕಟ್ಟಿದ್ದಾರೆ.
ಮದುವೆ ಸಮಾರಂಭದಲ್ಲಿ ನಟ ಅನುಪಮ್ ಖೇರ್, ಕ್ರಿಕೆಟರ್ ಇಶಾಂತ್ ಶರ್ಮಾ, ಕೃಷ್ಣ ಶ್ರಾಪ್ ಸೇರಿದಂತೆ ಹಲವು ಗಣ್ಯರ ಪಾಲ್ಗೊಂಡಿದ್ದರು.
ಕೆ ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಬಹು ದಿನಗಳಿಂದ ಪ್ರೀತಿ ಬಲೆಯಲ್ಲಿ ಸಿಲುಕಿದವರು. ಈಗ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.