ನವದೆಹಲಿ: ಭಾರತ ಜೋಡೊ ಯಾತ್ರೆ ವೇಳೆ ಸಂಸದ ಸಂಖೋತ್ ಸಿಂಗ್ ಚೌಧರಿ(76) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಿಸಲು 24 ಗಂಟೆಗಳ ಯಾತ್ರೆಯನ್ನು ಕಾಂಗ್ರೆಸ್ ಸ್ಥಗಿತಗೊಳಿಸಿದೆ.
ರಾಹುಲ್ ಗಾಂಧಿ ಜೊತೆಗೆ ಭಾರತ ಜೋಡೊ ಯಾತ್ರಯಲ್ಲಿ ಭಾಗಿಯಾದಾಗ ದಿಢೀರ್ ಕುಸಿದು ಬಿದ್ದರು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ರವಿವಾರ ಮಧ್ಯಾಹ್ನ ಜಲಂಧರ್ ನ ಖಾಲ್ಸಾ ಕಾಲೇಜು ಮೈದಾನದಿಂದ ಯಾತ್ರೆ ಪುನರ ಆರಂಭವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ( ಅವರ ಅನಿರೀಕ್ಷಿತ ನಿಧನದಿಂದಾಗಿ ರವಿವಾರ ಜಲಂಧರ್ ನಲ್ಲಿ ನಿಗದಿಯಾಗಿದ್ದ ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು, ಜನವರಿ 17 ರಂದು ಹೋಶಿಯಾರ್ ಪುರದಲ್ಲಿ ನಡೆಸಲಾಗುವುದು ಟ್ವೀಟ್ ಮಾಡಿದ್ದಾರೆ.