ಬೆಂಗಳೂರು: ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹಳೆಯ ಮೀಸಲಾತಿ ಮುಂದುವರೆಯಲಿದ್ದು, ಹೊಸ ಮೀಸಲಾತಿಗೆ ತಡೆ ನೀಡಿದೆ.
ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ 2C ಹಾಗೂ 2D ನೀಡಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ತಡೆ ನೀಡಿದೆ. ಸದ್ಯಕ್ಕೆ ಮುಂದಿನ ಆದೇಶದ ತನಕ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚನೆ ನೀಡಿದೆ.
ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ 2A ಹಾಗೂ 2B ಜೊತೆಗೆ 2C ಹಾಗೂ 2D ಪ್ರವರ್ಗ ಸೃಷ್ಟಿ ಮಾಡಲು ನಿರ್ಧಾರ ಮಾಡಿತ್ತು. 3A ನಲ್ಲಿ ಇರುವ ಒಕ್ಕಲಿಗರನ್ನು 2C ಗೆ ಮತ್ತು 3B ಯಲ್ಲಿ ಇದ್ದ ಲಿಂಗಾಯತರನ್ನು 2D ಗೆ ಸೇರ್ಪಡೆ ಮಾಡಲು ತೀರ್ಮಾನ ಮಾಡಿತ್ತು.