ಹುಬ್ಬಳ್ಳಿ: ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ .ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನವನಗರದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿರುವ “ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ” ಹಾಗೂ “ನವೀಕರಣಗೊಂಡ ಭಾನಜಿ ಡಿ. ಖಿಮಜಿ ಒಪಿಡಿ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ಸೇವೆ ನೀಡುವ ಸಂಸ್ಥೆಯಾಗಿ ಕ್ಯಾನ್ಸರ್ ಸಂಸ್ಥೆಯನ್ನು ಬೆಳೆಸಬೇಕಿದೆ. ವಿಜ್ಞಾನ ಪ್ರಯೋಗಾಲಯ ಹಾಗೂ ಆಯುರ್ವೇದ ಚಿಕಿತ್ಸೆ ಮೂಲಕ ನೋವಿಲ್ಲದೆ ಚಿಕಿತ್ಸೆ ನೀಡಲು ಪ್ರಯೋಗ ಮಾಡುವ ಕನಸು ಡಾ. ಆರ್.ಬಿ.ಪಾಟೀಲ್ ರದ್ದು. ಸಂಸ್ಥೆ ಬೆಳೆಯಬೇಕು. ಅದಕ್ಕೆ ಸ್ವಯಂಪ್ರೇರಿತವಾಗಿ ಜನ ಮುಂದಾಗಬೇಕು ಎಂದರು.

ಆಯುಷ್ಮಾನ್ ಕಾರ್ಡುಗಳನ್ನು ಹೊಂದಿದವರಿಗೆ ಪಿ.ಹೆಚ್.ಸಿ ಕೇಂದ್ರಗಳಿಂದ ಶಿಫಾರಸು ಮಾಡುವಾಗ ಈ ಸಂಸ್ಥೆಯನ್ನು ಸರ್ಕಾದಿಂದ ಬೆಂಬಲಿತ ಸಂಸ್ಥೆಯಾಗಿ ಪರಿಗಣಿಸಲು ಆದೇಶ ಹೊರಡಿಸಲಾಗುವುದು. ಭರತ್ ಹಾಗೂ ದಾಮ್ಜಿ ಅವರು ಹೆಚ್ಚಿನ ನೆರವು ನೀಡಬೇಕು ಎಂದರು.

ಸಂವೇದನಾಶೀಲ ಸರ್ಕಾರ
ನಮ್ಮ ಸರ್ಕಾರ ಸಂವೇದನಾಶೀಲ, ಸೂಕ್ಷ್ಮ ಹಾಗೂ ಸ್ಪಂದಿಸುವ ಸರ್ಕಾರ. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದೆ. ನಿಮ್ಮ ಕ್ಷೇತ್ರದ ಹುಡುಗ ಮುಖ್ಯಮಂತ್ರಿಯಾಗಿದ್ದು ತಪ್ಪು ಮಾಡಿದಾಗ ಕಿವಿ ಹಿಂಡಿ, ಸರಿಯಿದ್ದಾಗ ಬೆನ್ನು ಚಪ್ಪರಿಸಬೇಕು ಎಂದರು.

ಹುಬ್ಬಳ್ಳಿ ಧಾರವಾಡ ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಅಧ್ಯಕ್ಷ ಡಾ: ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.