ಗಂಗಾವತಿ: ರಾಜ್ಯದಲ್ಲಿ ದಿನ ಕಳೆದಂತೆ ಚುನಾವಣಾ ಕಾವು ಏರತೊಡಗಿದೆ. ಈ ಮೂಲಕ ಪಕ್ಷಾಂತರ ಪರ್ವವೂ ಹೆಚ್ಚಿದೆ. ಗಂಗಾವತಿ ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿರೂಪಾಕ್ಷ ಗೌಡ ಹೆರೂರ ‘ಕಲ್ಯಾಣ ಪ್ರಗತಿ ರಾಜ್ಯ’ ಪಾರ್ಟಿ ಸೇರುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲ. ಆದರಿಂದ ಬೆಂಬಲಿಗರೊಂದಿಗೆ ‘ಕಲ್ಯಾಣ ರಾಜ್ಯ ಪ್ರಗತಿ’ ಪಕ್ಷಕ್ಕೆ ಸೇರ್ಪಡೆ ಆಗಲಿದ್ದೇನೆ ಎಂದು ಗಂಗಾವತಿ ಕಾಂಗ್ರೆಸ್ ಮುಖಂಡ ವಿರೂಪಾಕ್ಷ ಗೌಡ ಹೆರೂರ ಹೇಳಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಶಿವರಾಜ್ ತಂಗಡಗಿ ನಿರ್ಲಕ್ಷಕ್ಕೆ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಭವಿಷ್ಯ ಇಲ್ಲ. ಕಳೆದ 40 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೀವಿ. ಇತ್ತೀಚಿನ ದಿನಗಳಲ್ಲಿ ಮುಖಂಡರ ಕಾರ್ಯವೈಖರಿಗೆ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ ಎಂದರು.
ಪೋನ್ ಕರೆ ಮೂಲಕ ಜನಾರ್ಧನ್ ರೆಡ್ಡಿ ಅವರೊಂದಿಗೆ ಮಾತನಾಡಲಾಗಿದೆ. ಆಪ್ತರ ಜೊತೆ ಮಾತುಕತೆ ನಡೆಸಿ ಜನಾರ್ಧನ್ ರೆಡ್ಡಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.