ಬೆಳಗಾವಿ: ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ನಡೆದಿದೆ. ಕುರುಬ ಸಮುದಾಯ ಎಸ್ ಟಿ ಸೇರ್ಪಡೆಗೆ ಒತ್ತಾಯಿಸಿ‌ ಹೋರಾಟ ನಡೆಸಿತ್ತು. ಈಗ ಮತ್ತೊಂದು ‌ಸಮುದಾಯ ಹೋರಾಟಕ್ಕೆ ತಯಾರಾಗಿದೆ.

ಮರಾಠಿ ಸಮುದಾಯ ಕೂಡ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ಸೌಧದ ಬಳಿ ಹೋರಾಟ ನಡೆಸುತ್ತಿದೆ. ಮರಾಠಿ ಸಮುದಾಯ ಕೂಡ 2ಎ ಮೀಸಲಾತಿ ಕೇಳುತ್ತಿದೆ.

ಬೆಳಗಾವಿಯ ಕೊಂಡಸಕೊಪ್ಪ ಬಳಿ ಟೆಂಟ್ ನಿರ್ಮಿಸಿ ಹೋರಾಟ ಆರಂಭಿಸಿದ್ದಾರೆ. ಹೋರಾಟದಲ್ಲಿ ಶಾಸಕರಾದ ಅನಿಲ್ ಬೆನಕೆ ಹಾಗೂ ಶ್ರೀಮಂತ ಪಾಟೀಲ ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.